ವರುಣ್ ಧವನ್(೨೪ ಏಪ್ರಿಲ್ ೧೯೮೭) ರವರೊಬ್ಬ ಭಾರತೀಯ ನಟ . ಇವರು ೨೦೧೪ ರಲ್ಲಿ ಫೋರ್ಬ್ಸ್ ಇಂಡಿಯಾದ ಸೆಲೆಬ್ರೆಟಿ ೧೦೦ ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿದ ಮೊದಲ ಹನ್ನೊಂದು ಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದು , ಹಿಂದಿ ಚಿತ್ರರಂಗದಲ್ಲಿ ಧವನ್ ರವರು ಹೆಸರುವಾಸಿಯಾಗಿದ್ದಾರೆ. ಚಲನಚಿತ್ರ ನಿರ್ದೇಶಕರಾದ ಡೇವಿಡ್ ಧವನ್ ರವರ ಪುತ್ರನಾದ ವರುಣ್ ಧವನ್ ರವರು ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಿಂದ ವ್ಯವಹಾರ ನಿರ್ವಹಣೆ ವಿಷಯವನ್ನು ಅಧ್ಯಯನ ಮಾಡಿದರು . ನಂತರ ಇವರು ೨೦೧೦ ರಲ್ಲಿ ಮೈ ನೇಮ್ ಈಸ್ ಖಾನ್ ಸಿನಿಮಾದಲ್ಲಿ ಕರಣ್ ಜೋಹರ್ ರವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು . ಇವರು ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು . ಇವರು ೨೦೧೪ ರ ಹಮ್ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದಲ್ಲಿ ನಟಿಸುವುದರ ಮೂಲಕ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದರು ಹಾಗೂ ೨೦೧೫ ರ ಎಬಿಸಿಡಿ ೨ ಎಂಬ ಡಾನ್ಸ್ ಸಿನಮಾ , ೨೦೧೫ ರ ಆಕ್ಷನ್ ಚಿತ್ರವಾದ ದಿಲ್ವಾಲೆ ಮತ್ತು ೨೦೧೭ ರ ಜುಡ್ವಾ ೨ , ೨೦೧೫ ರ ಕ್ರೈಮ್ ಥ್ರಿಲ್ಲರ್ ಬದ್ಲಾಪುರ್ , ೨೦೧೭ ರ ಭದ್ರಿನಾಥ್ ಕೀ ದುಲ್ಹನಿಯಾ ಮತ್ತು ೨೦೧೮ ರ 'ಅಕ್ಟೋಬರ್' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ . == ಜನನ ಮತ್ತು ಶಿಕ್ಷಣ == ವರುಣ್ ಧವನ್ ಇವರು ೨೪ ಏಪ್ರಿಲ್ ೧೯೮೭ ರಂದು ಡೇವಿಡ್ ಧವನ್ ಮತ್ತು ಕರುಣಾ ಧವನ್ ಎಂಬ ದಂಪತಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು . ಇವರ ಹಿರಿಯ ಸಹೋದರ ರೋಹಿತ್ ಚಲನಚಿತ್ರ ನಿರ್ದೇಶಕರಾಗಿದ್ದಾರೆ ಹಾಗೂ ಅವರ ಚಿಕ್ಕಪ್ಪ ಅನಿಲ್ ರವರೊಬ್ಬ ನಟ . == ಫಿಲ್ಮೋಗ್ರಾಫಿ == == ನಾಮನಿರ್ದೇಶನ ಮತ್ತು ಪ್ರಶಸ್ತಿಗಳು == == ಗ್ಯಾಲರಿ == == ಉಲ್ಲೇಖಗಳು ==